Top Navigation Example

Top Navigation Example

Advertizement

ಮಹಾಲಸಾ ನಾರಾಯಣಿ ದೇವಸ್ಥಾನ ಮಾರ್ದೊಳ್

 

 
 
 
 ಗೋವಾದ ಪ್ರಸಿದ್ಧ ದೇವಾಲಯಗಳಲ್ಲಿ ಇನ್ನೊಂದು ಪುರಾಣ ಪ್ರಸಿದ್ಧ ದೇವಾಲಯವನ್ನು ಇವತ್ತು ನಿಮಗೆ ಪರಿಚಯ ಮಾಡಿ ಕೊಡ್ತಾ ಇದ್ದೇನೆ. ಗೋವಾದ ಬೆಟ್ಟಗಳ ಸರಣಿಯಲ್ಲಿ ಇರುವ ಮಂಗೇಶ ದೇವಸ್ಥಾನದಿಂದ ಒಂದು ಕಿಲೋಮೀಟರ್ ಅಂತರದಲ್ಲಿರುವ ಮಾರ್ದೊಳ್ ಮಹಾಲಸ ನಾರಾಯಣಿ ದೇವಸ್ಥಾನ. ದೇವಸ್ಥಾನವು ಸಹ ಮಂಗೇಶ ದೇವಸ್ಥಾನದಂತೆ 450 ವರ್ಷಗಳಷ್ಟು ಹಳೆಯದು ಆದರೆ ನಾವು ಮಹಾಲಸ ನಾರಾಯಣಿ  ದೇವಿಯ ಇತಿಹಾಸವನ್ನು ಗಮನಿಸುವುದಾದರೆ ಇದು ನಮ್ಮನ್ನ  ಪೌರಾಣಿಕ ಸಮುದ್ರ ಮಂಥನ ಕಥೆಗೆ ಕರೆದೊಯುತ್ತದೆ.
 

 ಮಹಾಲಸ ನಾರಾಯಣಿ ದೇವಿಯ ಪೌರಾಣಿಕ  ಕಥೆ

ಮಹಾಲಸಾ ನಾರಾಯಣಿ ದೇವಿಯು ಶ್ರೀ ಹರಿ ವಿಷ್ಣುವಿನ ಮೋಹಿನಿ ಅವತಾರ ಎಂದು ಕರೆಯಲಾಗಿದೆ. ಮೋಹಿನಿ ಅವತಾರವು ಪೌರಾಣಿಕ ಸಮುದ್ರ ಮಂಥನ ಪ್ರಸಂಗದಲ್ಲಿ ಬರುತ್ತದೆ.             

    ಸಮುದ್ರಮಂಥನದ ಕಥೆಯನ್ನ ಈಗ ಗಮನಿಸೋಣ ದೇವದಾನವರು ಸೇರಿ ಸಮುದ್ರ ಮಂಥನವನ್ನ ಮಾಡಬೇಕಾದರೆ ಅವರಿಗೆ ಐರಾವತ, ಮಹಾಲಕ್ಷ್ಮಿ ಸೇರಿದಂತೆ 14 ರತ್ನಗಳು ಅದರಿಂದ ಸಿಗುತ್ತದೆ.  12 ಅದೃಶ್ಯ ರತ್ನಗಳು ಮತ್ತು ಅಮೃತ ಮತ್ತು ವಿಷ. ಜಗತ್ತಿಗೆ ಹಾನಿಕಾರಕವಾದ ವಿಷಯವನ್ನು  ಪರಮಾತ್ಮ ಶಿವ ತನ್ನ ಕಂಠದಲ್ಲಿ ಧಾರಣೆಯನ್ನ ಮಾಡಿ ಜಗತ್ತನ್ನ ಉಳಿಸಿದ್ರೆ ,ಅಮೃತಕ್ಕಾಗಿ ದೇವ ದಾನವರ ನಡುವೆ ಕದನವೇರ್ಪಡುತ್ತೆ.

 

ದಾನವರಿಗೆ ಅಮೃತ ಸಿಕ್ಕಿ ಅವರು ಚಿರಂಜೀವಿಯಾದರೆ ಜಗತ್ತಿಗೆ ಕಂಟಕ ಆದ್ದರಿಂದ ಜಗತ್ತಿನ ಪಾಲನ ಹಾರನಾದಂತಹ ಶ್ರೀಹರಿ ವಿಷ್ಣು ಸುಂದರವಾದ ಮೋಹಿನಿಯ ರೂಪವನ್ನು ಧಾರಣೆಯನ್ನ ಮಾಡಿ ಅಸುರರನ್ನ ಮೋಹಿಸುತ್ತಾನೆ. ಆದರೆ ರಾಹು ಮತ್ತು ಕೇತುವಿಗೆ ವಿಷಯದ ಅರಿವಾದದರಿಂದ ಅವರಿಬ್ಬರೂ ಅಮೃತವನ್ನು ಕುಟಿಲತೆಯಿಂದ ಸೇವಿಸಿಬಿಡುತ್ತಾರೆ. ಅನಂತರ ಸೂರ್ಯ ಮತ್ತು ಚಂದ್ರರಿಂದ ವಿಷಯವನ್ನು ತಿಳಿದ ಮೋಹಿನಿ ರಾಹು ಮತ್ತು ಕೇತುವನ್ನು ಸಂಹರಿಸುತ್ತಾಳೆ , ಇದು ಪೌರಾಣಿಕ ಕಥೆ. ಹೀಗೆ ಕೈಯಲ್ಲಿ ಖಡ್ಗವನ್ನು ರುಂಡವನ್ನು ಹಿಡಿದ ಶ್ರೀಹರಿಯ ಮೋಹಿನಿ ಅವತಾರವೇ ಮಹಾಲಸ ನಾರಾಯಣಿ.  


ಮಹಾಲಸ ನಾರಾಯಣಿಯ ಮೋಹಕ ಅವತಾರ ಹೇಗಿತ್ತು ಎಂದರೆ ಸ್ವತಹ  ಪರಮಾತ್ಮ ಶಿವನೇ ಅವತಾರಕ್ಕೆ ಮೋಹಿತರಾಗಿರುತ್ತಾನೆ. ಮತ್ತೊಂದು ಪುರಾಣದ ಉಲ್ಲೇಖದ ಪ್ರಕಾರ ಭಗವಾನ  ಶಿವ ತನ್ನ ಮಾರ್ಥಂಡ ಭೈರವ ರೂಪದಲ್ಲಿ ಮತ್ತು ಪಾರ್ವತಿ ಮೋಹಿನಿಯ ರೂಪದಲ್ಲಿ ಮದುವೆಯಾದ ಪ್ರಸಂಗದ ಉಲ್ಲೇಖ ಸಹ ಇದೆ.

ಪರಶುರಾಮನಿಂದ ಸ್ಥಾಪಿತವಾದ ಮಹಾಲಸ ನಾರಾಯಣಿಯ ದೇವಸ್ಥಾನ


 ನಂತರದ ದಿನಗಳಲ್ಲಿ ಭಗವಾನ್ ಪರಶುರಾಮ ವರುಣ ದೇವನಿಗೆ ಆಜ್ಞೆ ಮಾಡಿ ವರುಣಪುರದಲ್ಲಿ (ಅಂದರೆ ಈಗಿನ ವೆರ್ನ ದಲ್ಲಿ) ರತ್ನ ಖಚಿತವಾದ ದೇವಸ್ಥಾನದಲ್ಲಿ ಮಹಾಲಸಾ ನಾರಾಯಣೀಯ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಾರೆ ಎಂಬ ಉಲ್ಲೇಖ ಸಹ್ಯಾದ್ರಿ ಖಂಡದ ಕಥೆಯಲ್ಲಿದೆ.

ಬ್ರಾಹ್ಮಣರು ಯಜ್ಞವನ್ನು ಮಾಡಬೇಕಾದರೆ ಚಂಡಾಸುರನೆಂಬ ರಾಕ್ಷಸ ಪದೇ ಪದೇ ಅದಕ್ಕೆ ಅಡ್ಡಿಯನ್ನು ಉಂಟು ಮಾಡುತ್ತಿರುವಾಗ ಅವರೆಲ್ಲರೂ ಭಗವಾನ್ ಪರಶುರಾಮನಲ್ಲಿಗೆ ಹೋಗುತ್ತಾರೆ. ಭಗವಾನ್ ಪರಶುರಾಮನು ವರುಣಪುರದಲ್ಲಿರುವ ಮಹಾಲಸಾ ನಾರಾಯಣಿಯನ್ನು ಭಕ್ತಿಯಿಂದ ಆಹ್ವಾನಿಸುವಂತೆ ಬ್ರಾಹ್ಮಣರಿಗೆ ಸೂಚಿಸಿ ಕಳುಹಿಸುತ್ತಾನೆ. ಬ್ರಾಹ್ಮಣರು ಬಗೆ ಬಗೆಯ ಸ್ತೋತ್ರಗಳಿಂದ ಮಹಾಲಸ ನಾರಾಯಣಿಯನ್ನು ಜಪಿಸಿ ಆಹ್ವಾನಿಸಲಾಗಿ ಮಾಹಲಸ ನಾರಾಯಣಿ ಯು ಯು ಚಂಡಾಸುರನನ್ನು ಒದೆ ಮಾಡುತ್ತಾಳೆ. ಹೀಗೆ ಚಂಡಾಸುರ ರಾಕ್ಷಸನ ಒದೆಯನ್ನು ಮಾಡಿದಂತಹ ಕೈಯಲ್ಲಿ ರಾಕ್ಷಸರ ರುಂಡ ಹಿಡಿದಂತಹ ಮಾಹಾಲಸ ನಾರಾಯಣಿಯನ್ನು ಬ್ರಾಹ್ಮಣರು ತಮ್ಮ ಕುಲದೇವಿಯನ್ನಾಗಿ ಸ್ವೀಕರಿಸಿದರು ಎಂಬ ಉಲ್ಲೇಖ ಪುರಾಣ ಕಥೆಗಳಲ್ಲಿದೆ.

ಪೋರ್ಚುಗೀಸರ ದಾಳಿ ಮತ್ತು ದೇವಸ್ಥಾನ ಸ್ಥಳಾಂತರ





ಮೊದಲೇ ತಿಳಿಸಿದಂತೆ ಪರಶುರಾಮರಿಂದ ಪ್ರತಿಷ್ಠಾಪಲ್ಸಲ್ಪಟ್ಟ ವೆರ್ಣದಲ್ಲಿಯ ದೇವಾಲಯವನ್ನು 1567 ರಲ್ಲಿ ಮತಾಂಧ ಪೋರ್ಚುಗೀಸರು ನಾಶಪಡಿಸುತ್ತಾರೆ. ಆದರೆ ಮಾನಸ ನಾರಾಯಣಿಯನ್ನು ತಮ್ಮ ಕುಲದ ರಕ್ಷಕಿ ಎಂದು ಭಾವಿಸಿರುವಂತಹ ಕುಳಾವಿ ಜನರು ಮಹಾಲಸಾ ದೇವಿಯ ವಿಗ್ರಹವನ್ನು ವೆರ್ಣದಿಂದ ಪ್ರಸ್ತುತ ಮಾರ್ದೊಳ್  ಗೆ ಸ್ಥಳಾಂತರಿಸುತ್ತಾರೆ. ಹೀಗೆ ಮಹಾಲಸ ನಾರಾಯಣಿಯನ್ನು ತಮ್ಮ ಕುಲದೇವಿ ಎಂದು ಪೂಜಿಸುವ ಜನರು ಕುಮಟಾ ಮಾದನಗಿರಿ, ಉಡುಪಿಯ ಹರಿಕಂಡಿಗೆ ಹಾಗೂ ದೇಶದ ನಾನಾ ಭಾಗಗಳಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ.

No comments:

Post a Comment