ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಸೆಪ್ಟೆಂಬರ್ 4 ರವರೆಗೆ ಮಂತ್ರಾಲಯ ಸೇರಿದಂತೆ ಪ್ರಪಂಚದಾದ್ಯಂತ ಬೃಂದಾವನಗಳಲ್ಲಿ ರಾಯರ ಆರಾಧನೆ ನಡೆಯಲಿದೆ.
16 ನೇ ಶತಮಾನದ ಪ್ರಮುಖ ಸಂತ ರಾಘವೇಂದ್ರ ಸ್ವಾಮಿಗಳು ತಮ್ಮ ಅದ್ಭುತ ಶಕ್ತಿಗಳಿಂದಾಗಿ ದೇವರೆಂದು ಪೂಜಿಸಲ್ಪಟ್ಟರು. ಅವರನ್ನು ಶ್ರೀಗುರುರಾಯರು ಎಂದೂ ಕರೆಯಲಾಗುತ್ತದೆ ಮತ್ತು ಅವರ ಮಹಿಮೆಗಳು ಇಂದಿಗೂ ಜನರಲ್ಲಿ ಆಳವಾದ ಭಕ್ತಿಯನ್ನು ಪ್ರೇರೇಪಿಸುತ್ತವೆ.
ರಾಘವೇಂದ್ರ ಸ್ವಾಮಿಗಳು ಒಬ್ಬ ಪ್ರಮುಖ ಬ್ರಾಹ್ಮಣ ಮಾಧ್ವ ಸನ್ಯಾಸಿಯಾಗಿದ್ದು, ಅವರು ಮಧ್ವಾಚಾರ್ಯರ ಬೋಧನೆಗಳನ್ನು ಅನುಸರಿಸಿದರು .
ರಾಘವೇಂದ್ರ ಸ್ವಾಮಿಗಳು 1671ರ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ಜೀವಂತ ಸಮಾಧಿ ಸೇರುತ್ತಾರೆ. ಆ ಕಾರಣದಿಂದ ಪ್ರತಿ ವರ್ಷ ಈ ದಿನದಂದು ರಾಯರ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತದೆ.
ನಾಳಿನ ಸಂಚಿಕೆಯಲ್ಲಿ ರಾಯರ ಬಗ್ಗೆ ಕೆಲ ವಿವರಗಳನ್ನು ತಿಳಿಯೋಣ


No comments:
Post a Comment