Top Navigation Example

Top Navigation Example

Advertizement

ರಾಯರ ತಪೋಶಕ್ತಿ ಅಗ್ನಿಯಾದ ಗಂಧ

 

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ

 ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ


 ಒಮ್ಮೆ ವೆಂಕಟನಾಥರಿಗೆ(ರಾಯರು) ಪತ್ನಿ ಮತ್ತು ಮಗನ ಸಮೇತ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವಿತ್ತು. ಅವರು ಒಬ್ಬ ಬಡ ಬ್ರಾಹ್ಮಣರಾಗಿದ್ದ ಕಾರಣದಿಂದ ಆಹ್ವಾನಿತರು ಇವರಿಗೆ ಸರಿಯಾದ ಗೌರವ ನೀಡದೆ  ಗಂಧವನ್ನು ತೇಯುವ ಕೆಲಸವನ್ನು ನೀಡಿರುತ್ತಾರೆ.


ಆದರೂ ವೆಂಕಟನಾಥ ಒಂದಿಷ್ಟು ಬೇಜಾರಿಲ್ಲದೆ ಗಂಧವನ್ನು ತೇಯುತ್ತಾನೆ. ಆದರೆ ಗಂಧವನ್ನು ಒಂದಿಷ್ಟು ಬಿಡುವಿಲ್ಲದೆ ತೇಯುವ ಸಂದರ್ಭದಲ್ಲಿ ಭಗವಂತನ ಸಂಕಲ್ಪದಿಂದಾಗಿ ಆತನಿಗೆ ಗೊತ್ತಿಲ್ಲದೆ ಆತನ ಬಾಯಲ್ಲಿ ಅಗ್ನಿಸೂಕ್ತ ಪಟನೆಯಾಗುತ್ತದೆ.

ಊಟದ ಮೊದಲು ಎಲ್ಲಾ ವಿಪ್ರರು ತೇದಗಂಧವನ್ನು ಮೈಗೇ  ಲೇಪಿಸಿಕೊಳ್ಳುತ್ತಾರೆ. ಅದನ್ನು ಲೇಪಿಸಿಕೊಂಡ ಕೆಲ ಹೊತ್ತಿನಲ್ಲೇ ಅವರ ಮೈಯೆಲ್ಲಾ ವಿಪರೀತ ಉರಿಯಲು ಪ್ರಾರಂಭಿಸುತ್ತದೆ.

ಹೀಗಾದ ನಂತರ ಆಹ್ವಾನಿತ ಪೂಜೆಯ ಯಜಮಾನರು ಉರಿಯ ಕಾರಣವನ್ನು ಅವಲೋಕಿಸಿದಾಗ ಗಂಧದಿಂದ ಹೀಗಾಗಿರಬಹುದು ಎಂದು ಅನುಮಾನಿಸುತ್ತಾರೆ. ಗಂಧವನ್ನು ತೇದ ವೆಂಕಟನಾಥನಲ್ಲಿ ಕುರಿತು ನೀನು ಯಾರು ಗಂಧದಲ್ಲಿ ಏನನ್ನು ಸೇರಿಸಿದ್ದೀಯಾ ಎಂದು ಕಾರಣವನ್ನು ಕೇಳಿದಾಗ ವೆಂಕಟನಾಥ ಗುರು ಸುಧೀಂದ್ರರ ಶಿಷ್ಯ  ತಾನು ಏನನ್ನು ಸೇರಿಸಿಲ್ಲ ಆದರೆ ಗಂಧವನ್ನು ತೇಯುವಾಗ ನನ್ನ ಬಾಯಲ್ಲಿ ಮಂತ್ರೋಕ್ತಿ ಬರುತ್ತಿತ್ತು ಎಂದು ಉಚ್ಚರಿಸುತ್ತಾನೆ

ಆಗ ಯಜಮಾನರು ನಮ್ಮಿಂದ ಘೋರ ತಪ್ಪಾಯಿತು ನಾನು ಒಬ್ಬ ಪ್ರಖಾಂಡ ಪಂಡಿತನನ್ನು ಹೀಗೆ ಅವಮಾನಿಸಬಾರದಿತ್ತು, ದಯವಿಟ್ಟು ತಮ್ಮ ಅಪರಾಧವನ್ನು ಮನ್ನಿಸಿ ಎಂದು ಕೇಳಿಕೊಳ್ಳುತ್ತಾರೆ. ಇದಾದ ನಂತರ ವೆಂಕಟನಾಥ ವರುಣ ಸೂಕ್ತವನ್ನು ಹೇಳಿ ತೀರ್ಥವನ್ನು ಎಲ್ಲರ ಮೇಲೆ ಪ್ರೋಕ್ಷಿಸುತ್ತಾನೆ  ಇದರಿಂದ ಸರ್ವರ ಉರಿಯು ಶಮನವಾಗುತ್ತದೆ.

ವೆಂಕಟನಾಥ (ರಾಘವೇಂದ್ರ ಸ್ವಾಮಿಗಳು) 64 ವಿದ್ಯೆಗಳಲ್ಲಿ ಪಾರಂಗ ಪಂಡಿತರಾಗಿದ್ದು ಕಥೆಯು ಅವರ ತಪೋಶಕ್ತಿಗೆ ಒಂದು ಜೀವಂತ ಉದಾಹರಣೆಯಾಗಿದೆ.


No comments:

Post a Comment