Top Navigation Example

Top Navigation Example

Advertizement

ಮಹಾಲಸಾ ನಾರಾಯಣಿ ದೇವಸ್ಥಾನ ಮಾರ್ದೊಳ್

 

 
 
 
 ಗೋವಾದ ಪ್ರಸಿದ್ಧ ದೇವಾಲಯಗಳಲ್ಲಿ ಇನ್ನೊಂದು ಪುರಾಣ ಪ್ರಸಿದ್ಧ ದೇವಾಲಯವನ್ನು ಇವತ್ತು ನಿಮಗೆ ಪರಿಚಯ ಮಾಡಿ ಕೊಡ್ತಾ ಇದ್ದೇನೆ. ಗೋವಾದ ಬೆಟ್ಟಗಳ ಸರಣಿಯಲ್ಲಿ ಇರುವ ಮಂಗೇಶ ದೇವಸ್ಥಾನದಿಂದ ಒಂದು ಕಿಲೋಮೀಟರ್ ಅಂತರದಲ್ಲಿರುವ ಮಾರ್ದೊಳ್ ಮಹಾಲಸ ನಾರಾಯಣಿ ದೇವಸ್ಥಾನ. ದೇವಸ್ಥಾನವು ಸಹ ಮಂಗೇಶ ದೇವಸ್ಥಾನದಂತೆ 450 ವರ್ಷಗಳಷ್ಟು ಹಳೆಯದು ಆದರೆ ನಾವು ಮಹಾಲಸ ನಾರಾಯಣಿ  ದೇವಿಯ ಇತಿಹಾಸವನ್ನು ಗಮನಿಸುವುದಾದರೆ ಇದು ನಮ್ಮನ್ನ  ಪೌರಾಣಿಕ ಸಮುದ್ರ ಮಂಥನ ಕಥೆಗೆ ಕರೆದೊಯುತ್ತದೆ.
 

 ಮಹಾಲಸ ನಾರಾಯಣಿ ದೇವಿಯ ಪೌರಾಣಿಕ  ಕಥೆ

ಮಹಾಲಸಾ ನಾರಾಯಣಿ ದೇವಿಯು ಶ್ರೀ ಹರಿ ವಿಷ್ಣುವಿನ ಮೋಹಿನಿ ಅವತಾರ ಎಂದು ಕರೆಯಲಾಗಿದೆ. ಮೋಹಿನಿ ಅವತಾರವು ಪೌರಾಣಿಕ ಸಮುದ್ರ ಮಂಥನ ಪ್ರಸಂಗದಲ್ಲಿ ಬರುತ್ತದೆ.             

    ಸಮುದ್ರಮಂಥನದ ಕಥೆಯನ್ನ ಈಗ ಗಮನಿಸೋಣ ದೇವದಾನವರು ಸೇರಿ ಸಮುದ್ರ ಮಂಥನವನ್ನ ಮಾಡಬೇಕಾದರೆ ಅವರಿಗೆ ಐರಾವತ, ಮಹಾಲಕ್ಷ್ಮಿ ಸೇರಿದಂತೆ 14 ರತ್ನಗಳು ಅದರಿಂದ ಸಿಗುತ್ತದೆ.  12 ಅದೃಶ್ಯ ರತ್ನಗಳು ಮತ್ತು ಅಮೃತ ಮತ್ತು ವಿಷ. ಜಗತ್ತಿಗೆ ಹಾನಿಕಾರಕವಾದ ವಿಷಯವನ್ನು  ಪರಮಾತ್ಮ ಶಿವ ತನ್ನ ಕಂಠದಲ್ಲಿ ಧಾರಣೆಯನ್ನ ಮಾಡಿ ಜಗತ್ತನ್ನ ಉಳಿಸಿದ್ರೆ ,ಅಮೃತಕ್ಕಾಗಿ ದೇವ ದಾನವರ ನಡುವೆ ಕದನವೇರ್ಪಡುತ್ತೆ.

 

ದಾನವರಿಗೆ ಅಮೃತ ಸಿಕ್ಕಿ ಅವರು ಚಿರಂಜೀವಿಯಾದರೆ ಜಗತ್ತಿಗೆ ಕಂಟಕ ಆದ್ದರಿಂದ ಜಗತ್ತಿನ ಪಾಲನ ಹಾರನಾದಂತಹ ಶ್ರೀಹರಿ ವಿಷ್ಣು ಸುಂದರವಾದ ಮೋಹಿನಿಯ ರೂಪವನ್ನು ಧಾರಣೆಯನ್ನ ಮಾಡಿ ಅಸುರರನ್ನ ಮೋಹಿಸುತ್ತಾನೆ. ಆದರೆ ರಾಹು ಮತ್ತು ಕೇತುವಿಗೆ ವಿಷಯದ ಅರಿವಾದದರಿಂದ ಅವರಿಬ್ಬರೂ ಅಮೃತವನ್ನು ಕುಟಿಲತೆಯಿಂದ ಸೇವಿಸಿಬಿಡುತ್ತಾರೆ. ಅನಂತರ ಸೂರ್ಯ ಮತ್ತು ಚಂದ್ರರಿಂದ ವಿಷಯವನ್ನು ತಿಳಿದ ಮೋಹಿನಿ ರಾಹು ಮತ್ತು ಕೇತುವನ್ನು ಸಂಹರಿಸುತ್ತಾಳೆ , ಇದು ಪೌರಾಣಿಕ ಕಥೆ. ಹೀಗೆ ಕೈಯಲ್ಲಿ ಖಡ್ಗವನ್ನು ರುಂಡವನ್ನು ಹಿಡಿದ ಶ್ರೀಹರಿಯ ಮೋಹಿನಿ ಅವತಾರವೇ ಮಹಾಲಸ ನಾರಾಯಣಿ.  


ಮಹಾಲಸ ನಾರಾಯಣಿಯ ಮೋಹಕ ಅವತಾರ ಹೇಗಿತ್ತು ಎಂದರೆ ಸ್ವತಹ  ಪರಮಾತ್ಮ ಶಿವನೇ ಅವತಾರಕ್ಕೆ ಮೋಹಿತರಾಗಿರುತ್ತಾನೆ. ಮತ್ತೊಂದು ಪುರಾಣದ ಉಲ್ಲೇಖದ ಪ್ರಕಾರ ಭಗವಾನ  ಶಿವ ತನ್ನ ಮಾರ್ಥಂಡ ಭೈರವ ರೂಪದಲ್ಲಿ ಮತ್ತು ಪಾರ್ವತಿ ಮೋಹಿನಿಯ ರೂಪದಲ್ಲಿ ಮದುವೆಯಾದ ಪ್ರಸಂಗದ ಉಲ್ಲೇಖ ಸಹ ಇದೆ.

ಪರಶುರಾಮನಿಂದ ಸ್ಥಾಪಿತವಾದ ಮಹಾಲಸ ನಾರಾಯಣಿಯ ದೇವಸ್ಥಾನ


 ನಂತರದ ದಿನಗಳಲ್ಲಿ ಭಗವಾನ್ ಪರಶುರಾಮ ವರುಣ ದೇವನಿಗೆ ಆಜ್ಞೆ ಮಾಡಿ ವರುಣಪುರದಲ್ಲಿ (ಅಂದರೆ ಈಗಿನ ವೆರ್ನ ದಲ್ಲಿ) ರತ್ನ ಖಚಿತವಾದ ದೇವಸ್ಥಾನದಲ್ಲಿ ಮಹಾಲಸಾ ನಾರಾಯಣೀಯ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಾರೆ ಎಂಬ ಉಲ್ಲೇಖ ಸಹ್ಯಾದ್ರಿ ಖಂಡದ ಕಥೆಯಲ್ಲಿದೆ.

ಬ್ರಾಹ್ಮಣರು ಯಜ್ಞವನ್ನು ಮಾಡಬೇಕಾದರೆ ಚಂಡಾಸುರನೆಂಬ ರಾಕ್ಷಸ ಪದೇ ಪದೇ ಅದಕ್ಕೆ ಅಡ್ಡಿಯನ್ನು ಉಂಟು ಮಾಡುತ್ತಿರುವಾಗ ಅವರೆಲ್ಲರೂ ಭಗವಾನ್ ಪರಶುರಾಮನಲ್ಲಿಗೆ ಹೋಗುತ್ತಾರೆ. ಭಗವಾನ್ ಪರಶುರಾಮನು ವರುಣಪುರದಲ್ಲಿರುವ ಮಹಾಲಸಾ ನಾರಾಯಣಿಯನ್ನು ಭಕ್ತಿಯಿಂದ ಆಹ್ವಾನಿಸುವಂತೆ ಬ್ರಾಹ್ಮಣರಿಗೆ ಸೂಚಿಸಿ ಕಳುಹಿಸುತ್ತಾನೆ. ಬ್ರಾಹ್ಮಣರು ಬಗೆ ಬಗೆಯ ಸ್ತೋತ್ರಗಳಿಂದ ಮಹಾಲಸ ನಾರಾಯಣಿಯನ್ನು ಜಪಿಸಿ ಆಹ್ವಾನಿಸಲಾಗಿ ಮಾಹಲಸ ನಾರಾಯಣಿ ಯು ಯು ಚಂಡಾಸುರನನ್ನು ಒದೆ ಮಾಡುತ್ತಾಳೆ. ಹೀಗೆ ಚಂಡಾಸುರ ರಾಕ್ಷಸನ ಒದೆಯನ್ನು ಮಾಡಿದಂತಹ ಕೈಯಲ್ಲಿ ರಾಕ್ಷಸರ ರುಂಡ ಹಿಡಿದಂತಹ ಮಾಹಾಲಸ ನಾರಾಯಣಿಯನ್ನು ಬ್ರಾಹ್ಮಣರು ತಮ್ಮ ಕುಲದೇವಿಯನ್ನಾಗಿ ಸ್ವೀಕರಿಸಿದರು ಎಂಬ ಉಲ್ಲೇಖ ಪುರಾಣ ಕಥೆಗಳಲ್ಲಿದೆ.

ಪೋರ್ಚುಗೀಸರ ದಾಳಿ ಮತ್ತು ದೇವಸ್ಥಾನ ಸ್ಥಳಾಂತರ





ಮೊದಲೇ ತಿಳಿಸಿದಂತೆ ಪರಶುರಾಮರಿಂದ ಪ್ರತಿಷ್ಠಾಪಲ್ಸಲ್ಪಟ್ಟ ವೆರ್ಣದಲ್ಲಿಯ ದೇವಾಲಯವನ್ನು 1567 ರಲ್ಲಿ ಮತಾಂಧ ಪೋರ್ಚುಗೀಸರು ನಾಶಪಡಿಸುತ್ತಾರೆ. ಆದರೆ ಮಾನಸ ನಾರಾಯಣಿಯನ್ನು ತಮ್ಮ ಕುಲದ ರಕ್ಷಕಿ ಎಂದು ಭಾವಿಸಿರುವಂತಹ ಕುಳಾವಿ ಜನರು ಮಹಾಲಸಾ ದೇವಿಯ ವಿಗ್ರಹವನ್ನು ವೆರ್ಣದಿಂದ ಪ್ರಸ್ತುತ ಮಾರ್ದೊಳ್  ಗೆ ಸ್ಥಳಾಂತರಿಸುತ್ತಾರೆ. ಹೀಗೆ ಮಹಾಲಸ ನಾರಾಯಣಿಯನ್ನು ತಮ್ಮ ಕುಲದೇವಿ ಎಂದು ಪೂಜಿಸುವ ಜನರು ಕುಮಟಾ ಮಾದನಗಿರಿ, ಉಡುಪಿಯ ಹರಿಕಂಡಿಗೆ ಹಾಗೂ ದೇಶದ ನಾನಾ ಭಾಗಗಳಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ.

ಗೋವಾದ ಶ್ರೀ ಮಂಗೇಶ ದೇವಸ್ಥಾನದ ಇತಿಹಾಸ

 

ಗೋವಾ ಕೇವಲ ತನ್ನಲ್ಲಿರುವ ಬೀಚ್ ಗಳಿಗಾಗಿ , ನೈಸರ್ಗಿಕ ಸೌಂದರ್ಯಕ್ಕಾಗಿ ಮತ್ತು ಅಲ್ಲಿಯ ವೈಭವೋಪ್ರೇತ ಜೀವನಶೈಲಿಯ ಕಾರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿಲ್ಲ. ಗೋವಾ ಮೊದಲಿನಿಂದಲೂ ನಮ್ಮ ಅನೇಕ ಹಿಂದೂ ದೇವಾಲಯಗಳ ತಾಣ ಕೂಡ ಹೌದು. ಗೋವಾದ ದಟ್ಟ ಬೆಟ್ಟಗಳ ಸರಣಿಯಲ್ಲಿ ಇರುವಂತಹ ತ್ರೇತಾಯುಗದಲ್ಲಿ ಉದ್ಭವಗೊಂಡು ಭಗವಾನ್ ಪರಶುರಾಮರ ಕಾಲಘಟ್ಟದಲ್ಲಿ ಉಲ್ಲೇಖ ಇರುವ ಗೋವಾದ ಅತಿ ದೊಡ್ಡ ಮತ್ತು ಅತಿ ಹೆಚ್ಚು ಜನರು ಭೇಟಿ ನೀಡುವ ಪ್ರಸಿದ್ಧವಾದ ಮಂಗೇಶ ದೇವಸ್ಥಾನದ ಪರಿಚಯವನ್ನು ಮಾಡಿಕೊಡುತ್ತೇನೆ.


 

ಎಲ್ಲಿದೆ ದೇವಸ್ಥಾನ?  ತಲುಪುವುದು ಹೇಗೆ?

ಇನ್ನು ದೇವಸ್ಥಾನವನ್ನ ಹೇಗೆ ತಲುಪೋದು ಅಂತ ನೀವು ಯೋಚಿಸ್ತಾ ಇದ್ರೆ ದೇವಸ್ಥಾನ ಸ್ಥಿತವಾಗಿರುವುದು ಗೋವಾದ ಪೊಂಡಾ ಜಿಲ್ಲೆಯ ಪ್ರಿಯೋಲ್ ಮಂಗೇಶಿ ಎಂಬ ಪುಟ್ಟ ಗ್ರಾಮದಲ್ಲಿ, ಇದು ಗೋವಾದ ವಾಸ್ಕೋಡಿಗಾಮ ರೈಲು ನಿಲ್ದಾಣದಿಂದ 37 ಕಿಲೋಮೀಟರ್ ಗೋವಾದ ರಾಜಧಾನಿಯಾದ ಪಣಜಿ ಬಸ್ ನಿಲ್ದಾಣದಿಂದ 21 ಕಿಲೋಮೀಟರ್ ಮತ್ತು ಗೋವಾದ ಪ್ರಮುಖ ನಗರ ಮಡಗಾವ್ ನಿಂದ 25 ಕಿಲೋಮೀಟರ್ ದೂರದಲ್ಲಿದೆ. ಇದು ಗೋವಾದ ಅತಿದೊಡ್ಡ ಹಾಗೂ ಹೆಚ್ಚು ಜನರು ಭೇಟಿ ನೀಡುವ ದೇವಸ್ಥಾನಗಳಲ್ಲಿ ಒಂದಾಗಿದೆ.


ಶಿವಲಿಂಗ ಪೌರಾಣಿಕ ಚರಿತ್ರೆ

ಇನ್ನು ಈ ದೇವಸ್ಥಾನದ ಪೌರಾಣಿಕ ಚರಿತ್ರೆಯನ್ನು ನಾವು ಗಮನಿಸುವುದಾದರೆ ಇದು ನಮ್ಮನ್ನ ತ್ರೇತಾಯುಗಕ್ಕೆ ಕರೆದೊಯುತ್ತದೆ. ಒಮ್ಮೆ ಶಿವ ಮತ್ತು ಪಾರ್ವತಿ ಕೈಲಾಸದಲ್ಲಿ ಪಗಡೆ ಆಟವನ್ನು ಆಡ್ತಾರೆ. ಈ ಆಟದಲ್ಲಿ ಶಿವ ಪಾರ್ವತಿಯಿಂದ ಸೋಲ್ತಾನೆ. ಶಿವ ಇದರಿಂದ ಮನ ನೋಂದಂತೆ ವರ್ತಿಸಿ ಭೂಲೋಕಡೆದೆಗೆ ತನ್ನ ಪ್ರಯಾಣವನ್ನು ಬೆಳೆಸುತ್ತಾನೆ. ಕೆಲ ಸಮಯದ ನಂತರ ಪಾರ್ವತಿ ದೇವಿಯು ಶಿವನನ್ನ ಹುಡುಕುತ್ತಾ ಭೂಲೋಕದಡೆಗೆ ಹೋಗ್ತಾಳೆ.


ಶಿವ ಪಾರ್ವತಿಯನ್ನು ಪರೀಕ್ಷಿಸಲು ಒಂದು ಉಗ್ರವಾದ ಹುಲಿಯ ರೂಪವನ್ನು ಧರಿಸಿ ಪಾರ್ವತಿಯ ಮುಂದೆ ಬರುತ್ತಾನೆ. ಅಷ್ಟೊಂದು ಭೀಕರವಾದ ಹುಲಿ ಮತ್ತು ಅದರ ಗರ್ಜನೆಯಿಂದ ಭಯಬಿತಳಾದ ಪಾರ್ವತಿ ದೇವಿಯ ಬಾಯಿಂದ ಆಕೆಗೆ ಗೊತ್ತಿಲ್ಲದೆ "ತ್ರಾಹಿಮಾಮ್ ಗಿರೀಶ್" ಎಂಬ ಪ್ರಾರ್ಥನೆ ಬರತೊಡಗುತ್ತದೆ. ಇದರ ಅರ್ಥ ಓ ಬೆಟ್ಟಗಳ ದೇವತೆಯೇ ನನ್ನನ್ನು ಕಾಪಾಡು ಎಂದು.

ಪಾರ್ವತಿಯ ಈ ಕರೆಯನ್ನು ಆಲಿಸಿದಂತಹ ಶಿವ ತನ್ನ ಹುಲಿಯ ರೂಪವನ್ನು ತೊರೆದು ದರ್ಶನವನ್ನು ನೀಡುತ್ತಾನೆ ಮತ್ತು ನೀನು ನನ್ನನ್ನು ಕರೆದಂತ ಹೆಸರಿನಿಂದಲೇ ನಾನು ಇಲ್ಲಿ ನೆಲೆಸುವುದಾಗಿ ಶಿವ ಪಾರ್ವತಿಗೆ ಆಶೀರ್ವದಿಸುತ್ತಾನೆ. ಕಾಲಕ್ರಮೇಣ “ಮಾಮ್ ಗಿರೀಶ್” ಎಂಬ ಪದ ಮಾಂಗೀರಿಶ್ ಎಂದು ಪರಿವರ್ತನೆಯಾಗಿ ಮತ್ತು ಕಾಲಂತರದಲ್ಲಿ ಮಂಗೇಶ್ ಎಂಬ ಹೆಸರಿನಿಂದ ಮಾರ್ಪಾಡಾಯ್ತು. ಶಿವ ಪಾರ್ವತಿಯರು ಬಂದಿಳಿದ ಭೂಲೋಕದ ಆ ಪ್ರದೇಶವೇ ಗೋವಾದ  ಆಗಿನ ಕುಶಾಸ್ಥಳ ಎಂಬ ಗ್ರಾಮ. ಅಂದು ಅಲ್ಲಿ ಉದ್ಭವವಾದ ಆ ಲಿಂಗವೇ ಈಗಿನ ಪ್ರಿಯೋಲ್ ಗ್ರಾಮದಲ್ಲಿರುವ ಮಂಗೇಶೀ ದೇವಸ್ಥಾನದ ಶಿವಲಿಂಗ.

ಭಗವಾನ್ ಪರಶುರಾಮ ಕೊಟ್ಟ ದಾನದ ಭೂಮಿ ಯಲ್ಲಿ ದೇವಸ್ಥಾನದ ನಿರ್ಮಾಣದ  ರೋಚಕ ಕಥೆ

21 ಬಾರಿ ಕ್ಷತ್ರಿಯ ನಾಶವನ್ನು ಮಾಡಿದಂತಹ ಪರಶುರಾಮನು ಆ ರಕ್ತದ ಪಾಪದಿಂದ ಭೂಮಿಯನ್ನ ಶುದ್ಧಗೊಳಿಸಲು ಸೈಯಾದ್ರಿ ಪರ್ವತದಿಂದ ಸಮುದ್ರವನ್ನು ಹಿಂದುಡುತ್ತಾರೆ ಮತ್ತು ಯಜ್ಞದ ಸಂಕಲ್ಪವನ್ನು ಮಾಡುತ್ತಾರೆ. ಈ ಯಜ್ಞಕ್ಕಾಗಿ ಅವರು ಆಯ್ಕೆ ಮಾಡಿಕೊಂಡ ಪ್ರದೇಶ ಉತ್ತರ ಭಾರತದ ತಿಹೋತ್ರ (ಇದು ಈಗಿನ ಬಿಹಾರದ ಚಂಪಾರಣ ಎಂಬ ಕ್ಷೇತ್ರವಾಗಿ ಮಾರ್ಪಟ್ಟಿದೆ).

ಈ ಯಜ್ಞದ ಸಂಕಲ್ಪ ಪೂರ್ತಿಗೊಳಿಸಲು 10 ಗೋತ್ರದ ಬ್ರಾಹ್ಮಣ ಸಮುದಾಯವನ್ನು ಆಹ್ವಾನಿಸುತ್ತಾರೆ. ಈ ಆಹ್ವಾನಿತ ಬ್ರಾಹ್ಮಣರ ಕುಲದಲ್ಲಿ ವತ್ಸಗೋತ್ರದ ಲೋಮ ಶರ್ಮ ಮತ್ತು ಕೌಂಡಿಂನ್ಯ ಗೋತ್ರದ ಶಿವಶರ್ಮ ಇಬ್ಬರೂ ಯಜ್ಞದಲ್ಲಿ ಪಾಲ್ಗೊಳ್ಳುತ್ತಾರೆ. ಯಜ್ಞ ಮುಗಿದ ನಂತರ ಸಂಪೂರ್ಣ ಭೂಮಿಯನ್ನು ಈ ಬ್ರಾಹ್ಮಣ ಸಮುದಾಯಕ್ಕೆ ದಾನವಾಗಿ ನೀಡಿದ ಪರಶುರಾಮರು ತಪಸ್ಸನ್ನ ಆಚರಿಸಲು ಹೊರಟು ಹೋಗ್ತಾರೆ. ಹೀಗೆ ದಾನವಾಗಿ ಪಡೆದ ಭೂಮಿಯಲ್ಲಿ ಗೋವೆಯ ಕುತಾಲ್ ಸುತ್ತಮುತ್ತಲಿನ ಗ್ರಾಮಗಳು ಸೇರಿದ್ದರಿಂದ ಇವರಿಬ್ಬರೂ ಅಲ್ಲಿನ ಅಕ್ಕಪಕ್ಕದ ಗ್ರಾಮಗಳಲ್ಲಿ ಬಂದು ನೆಲೆಸುತ್ತಾರೆ.

ಶಿವಶರ್ಮ ಅಪ್ಪಟ ಶಿವ ಭಕ್ತನಾಗಿದ್ದು  ಅವನು ಈ ಗ್ರಾಮದಲ್ಲಿ ವಾಸ್ತವ್ಯ ಮಾಡಿದ ನಂತರ ಒಂದು ಅಚ್ಚರಿಯ ಸಂಗತಿ ಒಂದು ಎದುರಾಗುತ್ತದೆ. ಅವನ ಕನಸಿನಲ್ಲಿ ಭಗವಾನ್ ಶಿವನು ಬಂದು ನಿನ್ನ ಭಕ್ತಿಗೆ ತಾನು ಮೆಚ್ಚಿರುವುದಾಗಿ ಮತ್ತು ನಿನ್ನ ಸಮೀಪದಲ್ಲಿ ನಾನು ಪ್ರತ್ಯಕ್ಷ ವಾಗುವುದಾಗಿ ತಿಳಿಸುತ್ತಾನೆ. ಒಂದು ದಿನ ಇವನ ಗೋಪಾಲಕರಲ್ಲೊಬ್ಬ ಒಂದು ಹಸುವನ್ನು ಹಿಂಬಾಲಿಸುತ್ತಾ ಹೋಗಲಾಗಿ ಆ ಹಸು ಕಾಡಿನಲ್ಲಿ ಒಂದು ಪ್ರದೇಶದಲ್ಲಿ ಹಾಲನ್ನು ಎರೆಯುತ್ತಿರುವ ದೃಶ್ಯ ಅವನ ಕಣ್ಣಿಗೆ ಬೀಳುತ್ತದೆ. ಈ ದೃಶ್ಯವನ್ನು ಗಮನಿಸಿದ ಅವನಿಗೆ ಅಚ್ಚರಿಯ ಆಭಾಸವಾಗುತ್ತದೆ ಏಕೆಂದರೆ ಆ ಹಸುವಿಗೆ ಯಾವುದೇ ಕರು ಇರುವುದಿಲ್ಲ ಈ ವಿಷಯವನ್ನು ತನ್ನ ಯಜಮಾನನಾದ ಶಿವಶರ್ಮರಲ್ಲಿ ಬಂದು ಹೇಳುತ್ತಾನೆ. ಆಗ ಶಿವ ಶರ್ಮರು ತನ್ನ ಕನಸು ಮತ್ತು ಈ ವಿಚಾರ ಎರಡನ್ನು ತಾಳೆ ಹಾಕಿ ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಸ್ವಯಂಭು ಲಿಂಗ ಕಾಣಸಿಗುತ್ತದೆ. ಅಲ್ಲಿ ಒಂದು ಪುಟ್ಟದಾದ ಗುಡಿಯನ್ನು ನಿರ್ಮಿಸಿ ಅದಕ್ಕೆ ಅಂದಿನಿಂದ ಪೂಜೆ ಮಾಡಲು ಪ್ರಾರಂಭಿಸಲಾಗುತ್ತದೆ.

ಪೋರ್ಚುಗೀಸರ ದಾಳಿ ಮತ್ತು ದೇವಸ್ಥಾನ ಸ್ಥಳಾಂತರ

 

1543ರಲ್ಲಿ ಆಕ್ರಮಣಕಾರಿ ಪೋರ್ಚುಗೀಸರು, ಗೋವಾ ವನ್ನ ವಶಪಡಿಸಿಕೊಂಡ ನಂತರ ಅವರು ಅಲ್ಲಿ ಕ್ರೈಸ್ತೀಕರಣವನ್ನು ಪ್ರಾರಂಭಿಸುತ್ತಾರೆ. ಇವರ ಮತಾಂಧತೆಯಿಂದ ಬೇಸತ್ತ ಮುಳುಕೇಶ್ವರ (ವತ್ಸ ಗೋತ್ರದ ಯುವಕ ಈತನ ಪ್ರತಿಮೆಯನ್ನು ದೇವಸ್ಥಾನದ ಹಿಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ) ಎಂಬ ಯುವಕ ಈ ಲಿಂಗವನ್ನು ಕುಶಾಸ್ಥಳದಿಂದ ಈಗ ದೇವಸ್ಥಾನವಿರುವ ಜಾಗಕ್ಕೆ ತಂದಿರುವುದಾಗಿ ಉಲ್ಲೇಖ ಇದೆ. ಈತನು ಇಲ್ಲಿ ಈ ಲಿಂಗವನ್ನು ತಂದ ತಂಡ ದಿನ ಕಾರ್ತಿಕ ಶುದ್ಧ ದ್ವಾದಶಿ ತಿಥಿ (ಅಂದರೆ ತುಳಸಿ ಹಬ್ಬ).

 ಆದರೆ ದೇವಸ್ಥಾನವನ್ನು ಕಟ್ಟಿ ಲಿಂಗವನ್ನು ಪುನರ್ ಪ್ರತಿಷ್ಟಾಪನೆ ಮಾಘ ಶುದ್ಧ ಪೂರ್ಣಿಮೆಯ ದಿನ ಮಾಡಲಾಗುತ್ತದೆ. ಮುಂದೆ ಮರಾಠರ ಆಳ್ವಿಕೆಯಲ್ಲಿ ಇದಕ್ಕೆ ಇಂಡೋ ಇಸ್ಲಾಮಿಕ್ ಮತ್ತು ಪೋರ್ಚುಗಲ್ ಮಿಶ್ರ ಶೈಲಿಯ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ. 1973ರಲ್ಲಿ ಬಂಗಾರದ ಕಳಶವನ್ನು ಇದರ ಮೇಲೆ ಪ್ರತಿಷ್ಠಾಪನೆ ಮಾಡಿದ್ದು ಹೊಸದಾಗಿ ಆದ ಜೀರ್ಣೋದ್ಧಾರ.