Top Navigation Example

Top Navigation Example

Advertizement

ಗುರುಗಳ ಕರುಣೆ ಪ್ರೇತಾತ್ಮದಿಂದ ಮೋಕ್ಷದಡೆಗೆ

 

ಗುರುಗಳ ಕರುಣೆ ಪ್ರೇತಾತ್ಮದಿಂದ ಮೋಕ್ಷದಡೆಗೆ

 

ರಾಯರು ಸನ್ಯಾಸ ದೀಕ್ಷೆ ನಿರಾಕರಿಸಿದ ಸಂದರ್ಭ

ಗುರು ಸುಧೀಂದ್ರ ತೀರ್ಥರು ಅಂದರೆ ರಾಘವೇಂದ್ರ ಸ್ವಾಮಿಗಳ ಆಧ್ಯಾತ್ಮಿಕ ಗುರುಗಳು ತಮ್ಮ ನಂತರ ಮಠದ ಉತ್ತರಾಧಿಕಾರಿಯನ್ನು ಹುಡುಕ್ತಾ ಇರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಒಂದು ಕನಸು ಬೀಳುತ್ತದೆ ಅದರಲ್ಲಿ ಭಗವಂತ ಬಂದು ನಿನ್ನ ಶಿಷ್ಯ ಅಂದರೆ ವೆಂಕಟನಾಥ (ರಾಘವೇಂದ್ರ ಸ್ವಾಮಿಗಳ ಪೂರ್ವಶ್ರಮದ ಹೆಸರು) ಮಠದ ಉತ್ತರಾಧಿಕಾರಿಯಾಗಲು ಸೂಕ್ತ ವ್ಯಕ್ತಿ ಎಂದು ಸೂಚಿಸುತ್ತಾನೆ.

 ಆರಂಭದಲ್ಲಿ ವೆಂಕಟನಾಥ ಸಣ್ಣ ವಯಸ್ಸಿನ ಪತ್ನಿ ಮತ್ತು ಮಗನ ಮೇಲಿನ ಜವಾಬ್ದಾರಿಯಿಂದ ಇದನ್ನು ನಿರಾಕರಿಸಿದನಾದರೂ ದೈವೆಚ್ಚೆಯಂತೆ ಅದನ್ನು ಒಪ್ಪಿಕೊಳ್ಳಲೇ ಬೇಕಾದ ಪ್ರಸಂಗ ಬಂದೊದಗಿತು.

 

 

ವಿದ್ಯಾದಿದೇವತೆ ಕನಸಿನಲ್ಲಿ ಬಂದು ಜನ್ಮ ರಹಸ್ಯ ತಿಳಿಸಿದ ಸಂದರ್ಭ

ಇದಕ್ಕೆ ಕಾರಣ ಏನೆಂದರೆ ವಿದ್ಯೆಯ ಅಧಿದೇವತೆಯಾದ ಸರಸ್ವತಿ ತಾಯಿ ಅವರ ಕನಸಿನಲ್ಲಿ ಬಂದು ಅವರ ಜನ್ಮದ ಹಿಂದಿನ ರಹಸ್ಯವನ್ನು ಅವರಿಗೆ ತಿಳಿಸುತ್ತಾರೆ. ವೆಂಕಟನಾಥ ಶ್ರೀ ಗುರು ರಾಘವೇಂದ್ರ ಸ್ವಾಮಿಗಳಾಗಿ ಬದಲಾಗುವ ಸನ್ಯಾಸ ದೀಕ್ಷೆಯ ದಿನ ಬಂದಾಯ್ತು ಅದು 1621ರ ಪಾಲ್ಗುಣಿ ಶುಕ್ಲ ದ್ವಿತೀಯ ತಿಥಿ ಎಂದು ಏರ್ಪಾಟು ಮಾಡಲಾಗಿತ್ತು.

 


 

ಅವರ ಪೂರ್ವಾಶ್ರಮದ ಹೆಂಡತಿ ಸರಸ್ವತಿ ಅಮ್ಮನವರಿಗೆ ಅವರ ಮುಖವನ್ನು ಒಮ್ಮೆ ನೋಡುವ ಆಸೆ. ಆದರೆ ಸನ್ಯಾಸಿ ದೀಕ್ಷೆ ಸಂದರ್ಭದಲ್ಲಿ ಪೂರ್ವಾಶ್ರಮದ  ಸಂಬಂಧಗಳನ್ನು ಕಡಿದುಕೊಳ್ಳಬೇಕಾಗುತ್ತದೆ ಹಾಗಾಗಿ ನೋಡುವಂತಿಲ್ಲ ಎಂದು ಅವರ ಸಂಬಂಧಿಗಳು  ಅಲ್ಲಿ ತಲುಪಲು ಬಿಡುವುದಿಲ್ಲ.

ಇದರಿಂದ ಮನನೊಂದ ಸರಸ್ವತಿ ಅಮ್ಮನವರು ದೀಕ್ಷೆ ನೀಡುವಂತಹ ಸ್ಥಳದ ಪ್ರಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಬಿರುಗಾಳಿ ಅವರ ಮುಂದೆ ಎದುರಾಗುತ್ತದೆ. ಇದರ ಕಾರಣ ಅವರು ಸನ್ಯಾಸ ದೀಕ್ಷೆ ಸಂದರ್ಭದಲ್ಲಿ ಅಲ್ಲಿ ತಲುಪಲು ಸಾಧ್ಯವಾಗುವುದಿಲ್ಲ. ಇದರಿಂದ ಮನನೊಂದು ಗುರು ರಾಘವೇಂದ್ರ ತೀರ್ಥರ ಪೂರ್ವಾಶ್ರಮದ ಹೆಂಡತಿ ಸರಸ್ವತಿ ಅಮ್ಮ ದಾರಿಯಲ್ಲಿ ಇದ್ದ ಒಂದು ಹಳೆಯದಾದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. 

 

 

ಹಿಂದೂ ಧರ್ಮದ ತತ್ವಗಳ ಪ್ರಕಾರ ಆಕೆಯ ಅಕಾಲಿಕ ಮರಣದಿಂದಾಗಿ ಅವಳು ಸ್ವರ್ಗ ಮತ್ತು ಭೂಮಿಯ ನಡುವಿನ ಮಧ್ಯದಲ್ಲಿ ಪ್ರೇತಾತ್ಮವಾಗಿ (ಆಸೆ ಪೂರ್ತಿ ಆಗದ ಅತೃಪ್ತ ಆತ್ಮ) ಅಲೆಯ ಬೇಕಾಗುತ್ತದೆ.

ಸರಸ್ವತಿ ಅಮ್ಮನಿಗೆ ಇದ್ದ ಒಂದೇ ಒಂದು ಆಸೆ ಅಂದರೆ ಅದು ತನ್ನ ಗಂಡನನ್ನು ಸನ್ಯಾಸ ದೀಕ್ಷೆ ಸಂದರ್ಭದಲ್ಲಿ ವೀಕ್ಷಿಸುವುದು. ಈ ಆಸೆಯನ್ನ ಪೂರೈಸಿಕೊಳ್ಳಲು ಪ್ರೇತಾತ್ಮ ಗುರು ರಾಘವೇಂದ್ರ ಸ್ವಾಮಿಗಳನ್ನ ಕಾಣಲು ಮಠದ ಪ್ರಾಂಗಣಕ್ಕೆ ಬರುತ್ತದೆ.

ಗುರು ರಾಘವೇಂದ್ರ ಸ್ವಾಮಿಗಳು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ತಮ್ಮ ಹೆಂಡತಿಯ ಉಪಸ್ಥಿತಿಯನ್ನ ತಕ್ಷಣವೇ ಗ್ರಹಿಸುತ್ತಾರೆ ಮತ್ತೆ ತಮ್ಮ ಕಮಂಡಲದಿಂದ ಸ್ವಲ್ಪ ಪವಿತ್ರ ನೀರನ್ನ ಮಂತ್ರೋಚ್ಛಾರದೊಂದಿಗೆ ಅವಳ ಮೇಲೆ ಎರಚಿ ಅವಳಿಗೆ  ಜನನ ಮತ್ತು ಮರಣಗಳ ಚಕ್ರದಿಂದ ವಿಮೋಚನೆಯನ್ನು ಗೊಳಿಸುತ್ತಾರೆ.

 


ರಾಘವೇಂದ್ರ ಸ್ವಾಮಿಗಳ ಪ್ರತಿ ಸಮರ್ಪಿತ ಸರಸ್ವತಿ ಅಮ್ಮನವರ ನಿಸ್ವಾರ್ಥ ಸೇವೆಗಾಗಿ ಅವಳಿಗೆ ಸಿಕ್ಕ ಪ್ರತಿಫಲ ಈ ಮೋಕ್ಷ ಅಂತ ಪರಿಗಣಿಸಲಾಗಿದೆ.